
ಕನಸ್ಸಿನಲ್ಲಲ್ಲದಿದ್ದರೂ, ಸರಿ;
ನಿನ್ನ ಕಣ್ಣೆವೆಯೊಳಗಾದರೂ; ಒಂದಿನಿತು ನೆಲೆ ನೀಡು
ನಾ, ಬದುಕಬೇಕಿದೆ!
ಮನೆಯಂಗಳದಲ್ಲದಿದ್ದರೂ, ಸರಿ;
ನಿನ್ನ ನೆನಪಿನಂಗಳದಲ್ಲಾದರೂ, ಚೂರು ಜಾಗ ಕೊಡು;
ನಾ ಬದುಕಬೇಕಿದೆ!!
ನೀ, ನನ್ನ; ಪ್ರೀತಿಸದಿದ್ದರೂ, ಸರಿ;
ನಾ, ನಿನ್ನ ಪ್ರೀತಿಸುತಲೇ...
ನೀನಿರದ ಬದುಕ ಕಡಲ ಈಜಲೇಬೇಕಿದೆ!
ಅದಕಾದರೂ ಅಪ್ಪಣೆ ಕೊಡು;
ನಾ, ಬದುಕಲೇಬೇಕಿದೆ!!!