ನೀ, ಇಲ್ಲವಾದರೆ; ನಾ ಹೇಗೆ ಬಾಳಲಿ??? Tu Hi Re; Tu Hi Re!!! Tere Bina Main Kaise Jiyu!!
Tuesday, 29 May 2007
ನೀನಿರದಾಗ!
ಹೇಗೆ ಕಳೆದೆನೋ;
ನೀನಿರದ ದಿನಗಳ...
ಕೇಳು ಬೇಕಾದರೆ;
ಆ ಸಾಲು ನಕ್ಷತ್ರಗಳ.
ಮುಂಜಾನೆವರೆಗೂ,
ಅವುಗಳ ಜೊತೆಗಿದ್ದೆ.
ಒಂದು. ಎರಡು.. ಎಣಿಸುತಲೇ...
ಬಾರದೇ ಹೋಯಿತು ನಿದ್ದೆ!!!
ಮೌನ - ಸದ್ದು!
ಮಾತನಾಡಿದರೆ... ಬರೀ
ನಿನ್ನದೇ; ನೆನಪು!
ಅದಕೆ, ಮೌನವಾಗಿರಲು;
ಪ್ರಯತ್ನಿಸಿದ್ದು!
ಅಲ್ಲೂ; ನಿನ್ನ,
ನೆನಪುಗಳದ್ದೇ,
ಸದ್ದು!!!
Monday, 28 May 2007
ನಗು
ನಿನ್ನ ಮತ್ತು ನನ್ನ
ನಗುಗಿರುವ; ವ್ಯತ್ಯಾಸ ಗೊತ್ತೇನೇ?
ನೀನು;
ನೀನು ಖುಷಿಯಾಗಿದ್ದೀಯಾ, ಅಂತ...
ನಾನೋ?
ನೀನು ಖುಷಿಯಾಗಿದ್ದೀಯಾ, ಅಂತ!!!
ನಾ, ಬದುಕಲೇಬೇಕಿದೆ!!!
ಕನಸ್ಸಿನಲ್ಲಲ್ಲದಿದ್ದರೂ, ಸರಿ;
ನಿನ್ನ ಕಣ್ಣೆವೆಯೊಳಗಾದರೂ; ಒಂದಿನಿತು ನೆಲೆ ನೀಡು
ನಾ, ಬದುಕಬೇಕಿದೆ!
ಮನೆಯಂಗಳದಲ್ಲದಿದ್ದರೂ, ಸರಿ;
ನಿನ್ನ ನೆನಪಿನಂಗಳದಲ್ಲಾದರೂ, ಚೂರು ಜಾಗ ಕೊಡು;
ನಾ ಬದುಕಬೇಕಿದೆ!!
ನೀ, ನನ್ನ; ಪ್ರೀತಿಸದಿದ್ದರೂ, ಸರಿ;
ನಾ, ನಿನ್ನ ಪ್ರೀತಿಸುತಲೇ...
ನೀನಿರದ ಬದುಕ ಕಡಲ ಈಜಲೇಬೇಕಿದೆ!
ಅದಕಾದರೂ ಅಪ್ಪಣೆ ಕೊಡು;
ನಾ, ಬದುಕಲೇಬೇಕಿದೆ!!!
Newer Posts
Home
Subscribe to:
Posts (Atom)
About Me
hARi..Sh
Hmmmmmm... I'm simple, smart and loving boy..... I'm here to enjoy life fully...
View my complete profile
Blog Archive
▼
2007
(5)
►
June
(1)
▼
May
(4)
ನೀನಿರದಾಗ!
ಮೌನ - ಸದ್ದು!
ನಗು
ನಾ, ಬದುಕಲೇಬೇಕಿದೆ!!!